ಪರಾಭವ ಸಂವತ್ಸರದಲ್ಲಿ ಮೇಷಾದಿ ದ್ವಾದಶ ರಾಶಿಯವರ ವರ್ಷ ಭವಿಷ್ಯ ಫಲ

ಜನ್ಮ ಕುಂಡಲಿಯಲ್ಲಿ ತೋರಿ ಬರುವ ದಶಾಭುಕ್ತಿ ಫಲಗಳನ್ನು ಹೊಂದಿಸಿಕೊಳ್ಳಬೇಕು.
ಮೇಷ
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ವೃಶ್ಚಿಕ
ಧನು
ಮಕರ
ಕುಂಭ
ಮೀನ
ಮೇಷ ರಾಶಿ

ಈ ಸಂವತ್ಸರವು ಮಿಶ್ರ ಫಲದಿಂದ ಕೊಡಿದೆ. ಸ್ಪಷ್ಟ ನಿರ್ಧಾರದಿಂದ ಕೆಲಸ ಮುಂದುವರಿಸಲು ತ್ರಾಸದಾಯಕವಾಗಿರುತ್ತದೆ. ಆದರೂ ಸ್ವಪ್ರಯತ್ನದಿಂದ ಕೈಗೊಂಡ ಕೆಲಸಗಳು ತೃಪ್ತಿಕರ ಫಲಿತಾಂಶ ತಂದು ಸಮಾಧಾನವಿರುತ್ತದೆ. ಕಠಿಣ ಸಂಧರ್ಭದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟಸಾಧ್ಯವೆನಿಸುತ್ತದೆ. ತಮ್ಮದಲ್ಲದ ತಪ್ಪಿಗೆ ಕೊರಗುವ ಸಂಧರ್ಭವಿರುತ್ತದೆ. ವಿದ್ಯಾರ್ಥಿಗಳಿಗೆ ಮತ್ತು ಕೃಷಿಕರಿಗೆ ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ. ವ್ಯಾಪಾರಸ್ಥರಿಗೆ ಪೈಪೋಟಿ ಮತ್ತು ಸ್ಪರ್ಧೆಗಳಿಂದ ಸಂವತ್ಸರದ ಆರಂಭಿಕ ದಿನಗಳಲ್ಲಿ ಮಂದಗತಿಯ ಫಲ ದೊರೆತು ಉತ್ತಮ ದಿನಗಳು ಬರಲಿವೆ. ಭೂ ವ್ಯೆವಹಾರದಲ್ಲಿ ಲಾಭ ಮತ್ತು ಸ್ವಂತ ಮನೆ ಹೊಂದುವ ಕನಸು ನನಸಾಗುವುದು. ಉತ್ತಮ ಕೊರ್ಸ್ಗಳಿಗೆ ಸೇರಿ ಭವಿಷ್ಯ ರೂಪಿಸಿ ಕೊಳ್ಳುವವರಿಗೆ ಸದಾ ಫಲಪ್ರಾಪ್ತಿ ಇರುತ್ತದೆ. ಹಿತಶತ್ರುಗಳು, ಸಂಭಂದಿಗಳು ನಿಷ್ಟುರ ಹೊಂದಿ ಸ್ವಲ್ಪ ದೂರ ಸರಿದರು ನಿಮ್ಮ ಉತ್ತಮ ಗುಣಗಳನ್ನು ತಿಳಿದು ಒಂದಾಗುವರು. ಸಂವತ್ಸರದ ಕೊನೆಯ ಮೂರು ತಿಂಗಳು ಸಂಸಾರದಲ್ಲಿ ಅಶಾಂತಿಗಳು ಉಂಟಾಗುತ್ತದೆ. ಉದ್ಯೋಗದಲ್ಲಿ ಅತೃಪ್ತಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಸತತ ಪ್ರಯತ್ನದಿಂದ ಕೆಲಸ ಕಾರ್ಯಗಳು ನೆರವೆರುವುದು.

ಮಿಥುನ ರಾಶಿ

ಈ ವರ್ಷದಲ್ಲಿ ಗುರು ಗ್ರಹದ ಚಲನೆ ಉತ್ತಮ ರೀತಿಯಲ್ಲಿ ಇರುವುದರಿಂದ ಸಕಲ ಕಾರ್ಯದಲ್ಲಿ ಯಶಸ್ಸಿನ ಫಲ ದೊರೆಯುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆದು ಮಾನಸಿಕ ನೆಮ್ಮದಿ ಸಿಗುತ್ತದೆ. ಒಟ್ಟಾರೆಯಾಗಿ ಈ ವರ್ಷ ಶುಭ ಫಲಗಳೇ ಅಧಿಕವಾಗಿರುತ್ತದೆ. ಕೃಷಿಕರಿಗೆ, ವಿದ್ಯಾರ್ಥಿಗಳಿಗೆ, ವೈದಕೀಯ ಕ್ಷೇತ್ರದಲ್ಲಿ ವೃತ್ತಿಪರರಿಗೆ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದು. ಸಣ್ಣಪುಟ್ಟ ಅಡೆತಡೆಗಳು ಬಂದರೂ ಬಂಧುಗಳ ಸಹಕಾರದಿಂದ ಪರಿಹಾರ ಸಿಗುತ್ತದೆ. ಅತೀ ಒತ್ತಡದ ಕೆಲಸಗಳಲ್ಲಿ ಸಿಲುಕಿದವರಿಗೆ ತಾತ್ಕಾಲಿಕ ಚಿಂತೆಯಿಂದ ದೇಹರೋಗ್ಯವು ಕ್ಷೀಣಿಸುವುದು. ಅನ್ನದಾನದ ಕಾರ್ಯಗಳಿಂದ ಹೆಚ್ಚು ಮನ:ಸಂತೋಷ ಪ್ರಾಪ್ತಿಯಾಗಿ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ.  ಸೆಪ್ಟೆಂಬರ್ ನಂತರದ ದಿನಗಳಲ್ಲಿ ಸ್ವಜನ ಪಕ್ಷಪಾತ ಬಂಧುಮಿತ್ರರೊಡನೆ ಮನ:ಕ್ಲೇಶ ಉಂಟಾಗುವುದು. ಡಿಸೆಂಬರ್ ನಂತರದ ದಿನಗಳಲ್ಲಿ ಕೆಲವೊಮ್ಮೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕುವ ಸಂದರ್ಭವಿರುತ್ತದೆ. ವ್ಯವಹಾರದಲ್ಲಿ ನಿರತರಾದವರಿಗೆ ಬರಬೇಕಾದ ಬಾಕಿ ಹಣಗಳು ಕಾಲಕಾಲಕ್ಕೆ ಬಂದು ಸಂತಸವುಂಟಾಗುವುದು. ನಿಮ್ಮ ಪ್ರತಿಭೆಯನ್ನು ಕಂಡು ಸ್ಪರ್ಧಾಳುಗಳು ತೊಂದರೆ ಕೊಟ್ಟರು ಅದನ್ನು ಮೀರಿ ನಿಲ್ಲುವ ಸಾಮರ್ಥ್ಯ ನಿಮ್ಮಲಿರುವುದರಿಂದ ಶೀಘ್ರವಾಗಿ ಚೇತರಿಸಿಕೊಳ್ಳುವಿರಿ. ಹೊಸ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಯಾವುದೇ ಅಡೆತಡೆಗಳಿಲ್ಲದೇ ಕೆಲಸಗಳು ನೆರವೇರುವುದು. ಡಿಸೆಂಬರ್ ಅಂತ್ಯದವರೆಗೂ ಎಲ್ಲಾ  ಕ್ಷೇತ್ರದಲ್ಲಿ ಕೆಲಸ ಕೈಗೊಂಡವರಿಗೆ ಸತ್ಪಲ ಲಭ್ಯವಾಗುವುದು. ದೀರ್ಘ ಕಾಲದ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸದೇ ಸಕಾಲಿಕ ಚಿಕಿತ್ಸೆ ತೆಗೆದುಕೊಂಡಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುವುದು. ಕುಲದೇವರ ಸತತ ಆರಾಧನೆಯಿಂದ ಕಷ್ಟಗಳನ್ನು ನಿವಾರಿಸಿಕೊಳ್ಳುವ ಸಾಮರ್ಥ್ಯ ಹೊಂದುವಿರಿ.

ಸಿಂಹ ರಾಶಿ

ಗುರು ಮತ್ತು ಅಷ್ಟಮ ಶನಿಯ ಪ್ರಭಾವದಿಂದ ಈ ವರ್ಷ ಸ್ವಲ್ಪ ತ್ರಾಸದಾಯಕ ಫಲಿತಾಂಶಗಳೇ ಜಾಸ್ತಿ ಎನ್ನಬಹುದು. ಮೇ ಮೂರನೇ ವಾರದವರೆಗೂ ನಿಶ್ಚಿತ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಸಿಂಹ ಘರ್ಜನೆ ಕಡಿಮೆಯಾಗಿ ಕೆಲವೊಮ್ಮೆ ಉತ್ಸಾಹ ಕಡಿಮೆಯಾಗುವುದು. ಸದಾ ಪ್ರಯತ್ನಶೀಲರಾದ ನಿಮಗೆ ಫಲಿತಾಂಶಗಳು ಸ್ವಲ್ಪ ನಿಧಾನವಾಗಿ ಲಭಿಸುವುದು. ಮೇ ಯಿಂದ ಸೆಪ್ಟೆಂಬರ್ ಅಂತ್ಯದವರೆಗೂ ವಿಶೇಷ ಅವಕಾಶಗಳು ಲಭ್ಯವಾಗುವುದಲ್ಲದೇ ನಿಂತುಹೋದ ಕೆಲಸ ಕಾರ್ಯಗಳು ನೆಡೆದು ನೆಮ್ಮದಿ ಹೊಂದುವಿರಿ.  ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ಕೆಲಸವು ಚುರುಕುಗೊಳ್ಳುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಿದೇಶ ವ್ಯಾಸಂಗ ಮತ್ತು ವೃತ್ತಿಗಳಿಗೆ  ಅವಕಾಶಗಳು ದೊರೆತು ಸಂತೋಷಗೊಳ್ಳುವಿರಿ. ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ಸಂವತ್ಸರ ಅರಂಭದಲ್ಲಿ ನಿರೀಕ್ಷಿತ ಫಲ ದೊರೆಯದಿದ್ದರೂ, ಅಂತ್ಯದಲ್ಲಿ ನಿರೀಕ್ಷಿತ ಫಲವಿರುತ್ತದೆ. ನಿಮ್ಮ ಜಾಣ್ಮೆಯನ್ನು, ವಿದ್ಯೆಯನ್ನು ಪ್ರತಿ ಸ್ಪರ್ಧಿಗಳು ಕಲಿತು ನಿಮಗೆ ತೊಂದರೆ ಕೊಡುವ ಸಾಧ್ಯತೆ ಇದೆ.  ಚಾಡಿ ಮಾತುಗಳಿಂದ ಅಪಹಾಸ್ಯಕ್ಕೆ ಸಿಲುಕಿ, ತೊಂದರೆ ಉಂಟಾಗುವ ಸಂಧರ್ಭವಿರುತ್ತದೆ. ಕುಲ ದೇವರ ಸತತ ಅರಾಧನೆಯಿಂದ ಸಮೃಧ್ಧಿ ನೆಲೆಸುವುದು.

ತುಲಾ ರಾಶಿ

ಈ ವರ್ಷ ಒಟ್ಟಾರೆಯಾಗಿ ತುಂಬಾ ಫಲಗಳು ನಿರೀಕ್ಷೆಯ ಮಟ್ಟದಲ್ಲಿ ಇರುವುದು, ಬಾಕಿ ಉಳಿದ ಕೆಲಸಗಳು ಸಕಾಲದಲ್ಲಿ ನಡೆದು ಹೆಚ್ಚು ಪ್ರಯತ್ನಶೀಲರಾಗುವಿರಿ. ಹಲವು ಅವಕಾಶಗಳು ಸಕಾಲದಲ್ಲಿ ಸಿಕ್ಕಿ ವೃತ್ತಿಪರ ಯಷಸ್ಸು ನಿಮಗೆ ಸಂತಸವನ್ನು ತರುತ್ತದೆ. ಆನಿರೀಕ್ಷಿತ ಧನಯೋಗವಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವಿದೆ. ವಿದ್ಯಾರ್ಥಿಗಳಿಗೆ, ಸರಕಾರಿ ನೌಕರರಿಗೆ, ಚಿನ್ನ, ಬೆಳ್ಳಿ ಕೆಲಸಗಾರರಿಗೆ ಅವಕಾಶಗಳು ಹೆಚ್ಚು ಲಭ್ಯವಿದ್ದು ಆಹ್ಲಾದಕರ ವಾತಾವರಣವಿರುತ್ತದೆ. ದೀರ್ಘಕಾಲದ ರೋಗರುಜಿನಗಳಿಗೆ ಉತ್ತಮ ಚಿಕಿತ್ಸೆ ದೊರೆತು ಮಾನಸಿಕ ದುಗುಡಗಳಿಂದ ಹೊರಬರುತ್ತೀರಿ. ತಾಳ್ಮೆ ಮತ್ತು ಸ್ಪಷ್ಟ ಗುರಿಯಿಂದ ಮುನ್ನಡೆಯುವ ಹಲವು ಸುಸಂದರ್ಭಗಳು ಒದಗಿ ಬರುತ್ತದೆ. ದಾಯಾದಿಗಳ ಅಸೂಯೆ, ಮನ:ಕ್ಲೇಶ ಸಂವತ್ಸರದ ಆಂತ್ಯ ಭಾಗದಲ್ಲಿ ಕಂಡುಬಂದರೂ ವಸ್ತುಸ್ಠಿತಿ ಮತ್ತು ನಿಮ್ಮ ಪ್ರತಿಭೆಯ ಅರಿವಿನಿಂದ ವಿರೋಧಿಗಳು ಶಾಂತವಾಗುತ್ತರೆ. ನೀವು ಮಾಡುತ್ತಿರುವ ಹಲವು ಉತ್ತಮ ಕೇಲಸಗಳು ಸಮಾಜದಲ್ಲಿ ಮಾದರಿಯಾಗುತ್ತದೆ. ಝಾತಕ ಕುಂಡಲಿಯಂತೆ ದಶಾವರುಷಗಳ ಫಲಗಳಿಂದ ಸಣ್ಣಪುಟ್ಟ ತೊಂದರೆ ಬಂದರೂ ಶೀಘ್ರವಾಗಿ ಶಮನವಾಗುತ್ತದೆ. ಕೃಷಿಕರಿಗೆ ಉತ್ತಮ ಬೆಳೆಗಳು ದೊರೆತು ಹಣಕಾಸು ವ್ಯವಹಾರ ಉತ್ತಮವಾಗಿರುತ್ತದೆ. ಭೂ ವ್ಯವಹಾರ ಖರೀದಿಗಳು ಸಕಾಲದಲ್ಲಿ ನಡೆದು ಸಂತಸವುಂಟಾಗುತ್ತದೆ. ಸಂಕಟ ಬಂದಾಗ ವೆಂಕತರಮಣ ಎನ್ನುವಂತಾಗದೇ ಗುರುಭಕ್ತಿ ಸತತ ದೇವತಾ ಆರಾಧನೆಗಳಿಂದ ಆರೋಗ್ಯ ಐಶ್ಚರ್ಯದಲ್ಲಿ ಸದಾ ಏರುಗತಿಯಲ್ಲಿಯೇ ಇರುವ ಅವಕಾಶಗಳಿರುತ್ತದೆ.

ಧನು ರಾಶಿ

ಈ ವರ್ಷ ಆರಂಭದಲ್ಲಿ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ. ಮರಳಿ ಯತ್ನವ ಮಾಡ ಬೇಕಾಗುತ್ತದೆ. ಪ್ರಯತ್ನ ಮಾಡುವ ವಿಚಾರದಲ್ಲಿ ಸಂಶಯಗಳುಂಟಾಗುತ್ತವೆ. ಜನ್ಮಾಷ್ಟಮ ರಾಶಿಯಲ್ಲಿ ಗುರು ಗೃಹದ ಪರಿಣಾಮದಿಂದ ಸಕಾಲದಲ್ಲಿ ದೈವ ಬಲ ಸಿಗುತ್ತದೆ. ಉದಾಸೀನತೆ ಮತ್ತೆ ಕೆಲವೂಮ್ಮೆ ನಿರ್ಲಕ್ಷದಿಂದ ಅವಕಾಶ ವಂಚಿತರಾಗುವ ಸಂಧರ್ಭವಿರುತ್ತದೆ. ಹೊಸ ಹೊಸ ಅವಕಾಶಗಳನ್ನು ಸದುಪಯೋಗಿಸಿಕೊಂಡಲ್ಲಿ ಮುಂದಿನ ಯೋಜನೆಗಳು ಮತ್ತು ವ್ಯವಹಾರದಲ್ಲಿ ವೃದ್ಧಿ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ, ವೃತ್ತಿಪರರಿಗೆ ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ.  ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವಂತೆ ಅಪವಾದಕ್ಕೆ ಸಿಲುಕುವ ಸಂಭವವಿರುತ್ತದೆ. ಆರೋಗ್ಯದಲ್ಲಿ ಕೆಲವೊಮ್ಮೆ ಎರುಪೇರು ಸಣ್ಣ ಪುಟ್ಟ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆಶಾ ಕಿರಣ ಎಂಬಂತೆ ಅಪರಿಚಿತ ವ್ಯೆಕ್ತಿಯ ಸಹಕಾರ ದೊರೆತು ಅವಕಾಶಗಳು ಸೃಷ್ಟಿಯಾಗುತ್ತದೆ. ಕಛೇರಿ ಸಿಬ್ಬಂಧಿಗೆ ಸಕಾಲದಲ್ಲಿ ಪದನ್ನೋತಿ ದೊರೆತರೂ ರಾಜಕೀಯದಿಂದ ಕಿರಿಕಿರಿ ಅನುಭವಿಸುವ ಸಂಧರ್ಭವಿರುತ್ತದೆ.  ಹೆಚ್ಚು ಪ್ರಚಾರ ಕೊಡದೆ ಕೆಲಸದತ್ತ ಏಕಾಗ್ರತೆ ಇದ್ದರೆ ಗಮನವಿಟ್ಟರೆ ಪಲಿತಾಂಶ ಶತಸಿದ್ದ.  ಹೈನುಗಾರಿಕೆ ಮತ್ತು ಕೃಷಿಕರಿಗೆ ಸಾಮಾನ್ಯ ಫಲವಿರುವುದು.  ವ್ಯವಾಹಾರದಲ್ಲಿ ಬಾಕಿ ಹಣವು ವಿಳಂಬಗೊಂಡು ಚಿಂತೆ ಉಂಟಾಗುವುದು. ತಾಳ್ಮೆಯಿಂದ ಕರ್ತವ್ಯ ನಿಭಾಯಿಸಬೇಕು.

ಕುಂಭ ರಾಶಿ

ಈ ವರ್ಷ ಗ್ರಹಗಳ ಅನಾನುಕೂಲಗಳಿಂದ ಸ್ವಲ್ಪ ಕಷ್ಟವನ್ನು ಎದುರಿಸ ಬೇಕಾಗುವುದು. ಶನಿ ರಾಹು ಮತ್ತು ಗುರುವಿನ ಚಲನೆಗಳು ತೃಪ್ತಿ ದಾಯಕವಗದೆ ಇರುವುದರಿಂದ ತೊಂದರೆಗಳು ಉಂಟಾಗುವುದು. ಅಪಘಾತ ಭಯ ಅನಿರೀಕ್ಷಿತ ಅರೋಗ್ಯ ತೊಂದರೆಗಳು ಸಂಭವಿಸ ಬಹುದು.  ಸಂವತ್ಸರದ ಪೂರ್ವಾಧಲ್ಲಿ ಹೆಚ್ಚು ತೊಂದರೆಗಳು ಕಂಡುಬಂದು ಉತ್ತಾರ್ಧದಲ್ಲಿ ನಿರೀಕ್ಷತ ಪಲಿತಾಂಶಗಳು ದೊರೆಯುತ್ತದೆ. ಮಾಡುವ ಕೆಲಸದಲ್ಲಿ ನಿಖರತೆ, ಎಕಾಗ್ರತೆ ಕಂಡುಕೊಳ್ಳಬೇಕು. ಆಗೋಸ್ಟ್ ನಂತರ ನೀವು ಪ್ರಯಥ್ನ ಪಟ್ಟ ಕೆಲಸದಲ್ಲಿ ಯಸಶ್ಸು ಲಭಿಸಲು ಅರಂಭಿಸುತ್ತದೆ. ಮನೆಯಲ್ಲಿ ಮದುವೆ ಉಪನಯನ ಕಾರ್ಯಗಳು, ಸಕಾಲದಲ್ಲಿ ನಡೆದು ಕುಟುಂಬಿಕರ ಬೇಟಿಯಿಂದ, ಸಂತಸ ಹೊಂದುವಿರಿ. ಆಕ್ಟೊಬರ್ ನಂತರ ವಿದ್ಯಾರ್ಥಿಗಳಿಗೆ, ವ್ಯವಹಾರಸ್ಥರಿಗೆ ಉತ್ತಮ ಅರ್ಥಿಕ ಲಾಭವಿದೆ. ಕೃಷಿಕರಿಗೆ, ವೃತ್ತಿಪರರಿಗೆ ಮಿಶ್ರ ಫಲವಿರುತ್ತದೆ. ಕೆಲವು ತಪ್ಪು ಆಲೋಚನೆಗಳಿಂದ ಕಾರ್ಯ ವಿಘ್ನ, ದ್ವಂದ್ವ ಯೋಚನೆಗಳಿಗೆ ಸಿಲುಕಿ ಸಂತ್ರಾಸದಾಯಕವೆನಿಸುತ್ತದೆ. ಕೌಟುಂಬಿಕ ಮನಸ್ತಾಪವು ದೂರವಾಗಿ ಆರೋಗ್ಯ ವೃದ್ದಿಯಿಂದ ವರ್ಷಾಂತ್ಯದಲ್ಲಿ ನೆಮ್ಮದಿ ಉಂಟಾಗುವುದು.

ವೃಷಭ ರಾಶಿ

ಒಟ್ಟಾರೆಯಾಗಿ ಈ ಸಂವತ್ಸರ ನಿಮಗೆ ಉತ್ತಮ ಪಲಿತಾಂಶವನ್ನು ಕೊಡುತ್ತದೆ. ಬಾಕಿ ಉಳಿದ ಕೆಲಸಗಳು ಶೀಘ್ರವಾಗಿ ನೇರವೆರುವುದು.  ಉದ್ಯೋಗ, ಕೃಷಿ, ಹೈನುಗಾರಿಕೆ ಎಲ್ಲಾ ಕ್ಷೇತ್ರದವಿರಿಗೆ ಪ್ರಯತ್ನಕ್ಕೆ ವಿಶೇಷ ಫಲ ದೊರೆಯುತ್ತದೆ. ಹೊಸ ಉದ್ಯೋಗವು ಕೈಗೂಡುತ್ತದೆ.  ನಿರೀಕ್ಷೆಯಲ್ಲಿರುವ ಪದೋನ್ನತಿ ಸಕಾಲದಲ್ಲಿ ದೊರೆತು ಕುಟುಂಬದಲ್ಲಿ ಸಂತೋಷ ವಾತವರಣ ವಿರುತ್ತದೆ. ಮನೆ ವಾಹನೆ, ಭೂ ಖರೀದಿಗಳು ಸಕಾಲದಲ್ಲಿ ಸಂಭವಿಸಿ, ಮುಂಬರುವ ಎಲ್ಲಾ ಅಡೆ ತಡೆಗಳು ನಿವಾರಣೆಯಾಗುತ್ತದೆ.  ದೀಪಾವಳಿ ನಂತರ ಅದೃಷ್ಟ ಒಲಿದು ಬಂದು ಬಯಸದೆ ಬಂದ ಭಾಗ್ಯವೆಂದು ಸಂತೋಷ ಹೊಂದುವಿರಿ.  ಸಾಮಾಜಿಕ ಕಾರ್ಯದಲ್ಲಿ ನಾಯಕ್ತ್ವ ಹೊಂದುವಿರಿ. ವಿಶೇಷ ಸ್ಠಾನ ಮಾನಗಳು ಲಬಿಸಿ ಕೀರ್ತಿ ಶಿಖರ ತಲುಪುವಿರಿ. ಶತ್ರುಗಳು ಕೂಡ ನಿಮ್ಮ ಪ್ರತಿಭೆಗೆ ಬೆರಾಗಾಗಿ ತೊಂದರೆ ಕೊಡುವ ಪ್ರಯತ್ನದಿಂದ ದೂರ ಸರಿಯುತ್ತಾರೆ.  ಕುಟುಂಬದ ದಯಾವದಿಗಳು ಕ್ಷಣಿಕ ತೂಂದರೆಯನ್ನು ಕೊಟ್ಟರು ಅದನ್ನು ಎದುರಿಸುವ ಸರ್ವಕಾಲಿಕ ಶಕ್ತಿಯು ನಿಮಗೆ ಇರುತ್ತದೆ. ವಿದ್ಯಾರ್ಥಿಗಳಿಗೆ , ರೈತರಿಗೆ, ವ್ಯಾಪಾರಸ್ತರಿಗೆ, ಉದ್ಯೋಗರಿಗೆ ವಿಶೇಷ ಫಲ ಲಭ್ಯವಿರುತ್ತದೆ.

ಕರ್ಕಾಟಕ ರಾಶಿ

ಗುರು, ಶನಿ, ರಾಹುವಿನ ಸ್ಥಾನಪಲ್ಲಟದಿಂದ ಈ ವರ್ಷ ಮಿಶ್ರಫಲವನ್ನು ಹೊಂದುವಿರಿ.  ಅಕಸ್ಮಾತ್ ಧನವ್ಯಯವು ಸ್ವಲ್ಪಮಟ್ಟಿಗೆ ಸಂತ್ರಾಸರನ್ನಾಗಿ ಮಾಡುತ್ತದೆ. ಪ್ರಯತ್ನವಿಲ್ಲದೇ ನಿರೀಕ್ಷೆ ಸಲ್ಲದು ಎನ್ನುವಂತೆ ಸದಾ ಏಕಾಗ್ರತೆಯಿಂದ ಸ್ಪಷ್ಟ ಗುರಿ ಹೊಂದಬೇಕು. ಚಂಚಲ ಸ್ವಭಾವವನ್ನು ನಿಗ್ರಹ ಮಾಡಿಕೊಳ್ಳಬೇಕು. ಆನಿರೀಕ್ಷಿತ ರೋಗ ತೆಲೆದೋರಿ ಮಾನಸಿಕ ನೆಮ್ಮದಿ ಕ್ಷೀಣಿಸುವುದು. ಆಗಸ್ಟ್ ಅಂತ್ಯದವರೆಗೆ ಶುಭ ಫಲಗಳು ಅಧಿಕ ಪ್ರಮಾಣದಲಿದ್ದು ಹಲವು ಅವಕಾಶಗಳು ಲಭಿಸುವುದು. ಸೆಪ್ಟಂಬರ್ ನಿಂದ ಡಿಸೆಂಬರ್ ವರೆಗೆ ಮಾಡಿದ ಕೆಲಸಗಳಲ್ಲಿ ತೃಪ್ತಿ ಸಿಗದೆ ಚಿಂತೆ ಹಾಗೂ ನಂಬಿದವರ ಅಸಹಕಾರ, ತಪ್ಪು ಗ್ರಹಿಕೆಗಳಿಂದ ಅವಕಾಶಗಳು ಕೈಚೆಲ್ಲಿ ಸ್ವಲ್ಪ ಮಟ್ಟಿಗೆ ನಿರಾಶರಾಗುವ ಸಂದರ್ಭವಿರುತ್ತದೆ. ಅದರೆ ಡಿಸೆಂಬರ್ ನಂತರ ದಿನಗಳಲ್ಲಿ ಪ್ರಯತ್ನಿಸುವ ಎಲ್ಲಾ ಕಾರ್ಯಗಳಿಗೂ ಶ್ರೇಯಸ್ಸು ಲಭಿಸುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಲಭಿಸಿ ನಿರೀಕ್ಷಿತ ಯಶಸ್ಸು ಸಿಗುವುದು. ಕೃಷಿಕರಿಗೆ, ಬೆಳೆ ನಾಶದಿಂದ ನಷ್ಟ, ಪಶು ಮತ್ತು ಹೈನುಗಾರಿಕೆ ವೃತ್ತಿಯಲ್ಲಿರುವವರಿಗೆ ಅನಿರೀಕ್ಷಿತ ಧನವ್ಯಯವಾಗುವ ಸಂದರ್ಭವಿರುತ್ತದೆ.  ಚರ್ಚೆ, ಮನಸ್ತಾಪಗಳು ರಾಜಿ ಹಂತದಲ್ಲಿ ತಲುಪಿ ಮಾನಸಿಕ ನೆಮ್ಮದಿ ತಲುಪುವುದು. ಅನವಶ್ಯಾವಾಗಿ ಮಾತಿನಲ್ಲಿ ಸಿಲುಕಿ ಅಧೀರನ್ನಾಗಿ ಮಾಡುವ ಸಂದರ್ಭವಿರುತ್ತದೆ.  ಸಂವತ್ಸರ ಕೊನೆಯ ಭಾಗದಲ್ಲಿ ತೀರ್ಥಕ್ಷೇತ್ರದ ಪ್ರಯಾಣ ಯೋಗವಿರುತ್ತದೆ.

ಕನ್ಯಾ ರಾಶಿ

ಈ ಸಂವತ್ಸರದಲ್ಲಿ ನಿಮ್ಮ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುವುದಲ್ಲದೇ ಆಶಾದಾಯಕ ಫಲಿತಾಂಶಗಳೇ ಜಾಸ್ತಿ ಎನ್ನಬಹುದು. ನಿಖರ ಗುರಿಯೊಂದಿಗೆ ಕೆಲಸಗಳಲ್ಲಿ ಕ್ರಮವಹಿಸಲು ಸಕಾಲದಲ್ಲಿ ಅವಕಾಶಗಳು ಲಭಿಸುವುದು. ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ವಿಶೇಷ ಗೌರವ ಸಿಗುತ್ತದೆ. ಹೆಚ್ಚಿನ ವಿದ್ಯಾಭ್ಯಾಸದ ಆಕಾಂಕ್ಷಿಗಳಿಗೆ ಅವಕಾಶ ಲಭಿಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯಶೀಲರಾಗುತ್ತೀರಿ. ಉತ್ತಮ ಅವಕಾಶಗಳನ್ನು ಸಮಚಿತ್ತದಿಂದ ನಿರ್ಣಯಿಸಲು ಕೆಲವೊಮ್ಮೆ ಹೆಣಗಾಡಬೇಕಾದೀತು. ಆನ್ನದಾವ, ವಿದ್ಯದಾನ ಮುಂತಾದ ಸಕಾಲಿಕ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಸಾಮಾಜಿಕ ಮನ್ನಣೆ, ಬಹುಕಾಲದ ಶ್ರಮಕ್ಕೆ ತಕ್ಕ ಫಲ, ಪ್ರಶಸ್ತಿ ದೊರೆತು ಸಂತಸ ಹೊಂದುವಿರಿ. ಸಂವತ್ಸರದ ಉತ್ತರಾರ್ಧದಲ್ಲಿ ಮನೆ ಮಂದಿಯಲ್ಲಿ ಸಣ್ಣ ಮನಸ್ತಾಪ, ಅನಗತ್ಯ ಚರ್ಚೆಗಳು, ಮಕ್ಕಳ ಅಸಹಕಾರದಿಂದ ಸ್ವಲ್ಪ ಒತ್ತಡಕ್ಕೊಳಗಾಗುವಿರಿ. ಬಹುಕಾಲದಲ್ಲಿ ಇರುವ ವ್ಯಾಜ್ಯ, ದ್ವೇಷಗಳು ಮಿತ್ರತ್ವಕ್ಕೆ ತಿರುಗುತ್ತದೆ. ರಾಜಿ ಸಂಧಾನದ ಮೂಲಕ ಹಲವು ಸಮಸ್ಯೆಗಳು ಬಗೆಹರಿಯುತ್ತದೆ. ಚೋರ ಭಯ, ಅಗ್ನಿ ಭಯದ ಸಣ್ಣ ಅವಘಡಗಳ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ. ನಿಮ್ಮನ್ನು ಅನುಸರಿಸುವ ಜನರು ಮತ್ತು ಹಿತೈಷಿಗಳಿಂದಲೇ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಉದ್ಯೋಗದಲ್ಲಿ ಭಡ್ತಿ, ಪ್ರಸಂಸೆ ಸಿಕ್ಕಿ ಕೆಲವರಿಗೆ ಸಹಾಯಹಸ್ತ ನೀಡುವ ಸಾಧ್ಯತೆಯೂ ಇದೆ. ಕುಲ ದೇವರ ಸತತ ಅರಾಧನೆಯಿಂದ ಮಾನಸಿಕ ನೆಮ್ಮದಿಯನ್ನು ಹೊಂದುವಿರಿ.

ವೃಶ್ಚಿಕ ರಾಶಿ

ಈ ವರ್ಷ ಆರಂಭದಲ್ಲಿ ಉತ್ತಮ ಫಲ ದೊರೆತು ಸಂವತ್ಸರದ ಕೊನೆಯ ಭಾಗದಲ್ಲಿ ಸ್ವಲ್ಪ ಪ್ರಮಾಣದ ಚಿಂತೆಗಳು ಅವರಿಸಿ ತೊಂದರೆಯಾಗುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ಯೋಜನೆ ಮತ್ತು  ಉತ್ತಮ ನಿರ್ಧಾರಗಳಿಂದ ಗಂಡಾಂತರಗಳಿಂದ ಹೊರಬರುವ ಸಾಧ್ಯತೆ ಇರುತ್ತದೆ. ಮತ್ಸರದ ಜನರ ಸಂಖ್ಯೆ ಹೆಚ್ಚುತ್ತದೆ. ವ್ಯಾಪಾರದಲ್ಲಿ ಸ್ಪರ್ಧೆ, ಮತ್ತು ಕೌಟುಂಬಿಕ ವಾತವರಣದಲ್ಲಿ ಅಶಾಂತಿ ನೆಲೆಸುತ್ತದೆ. ಸಾದ ಶ್ರಮದ ಜೀವನದಲ್ಲಿ  ಹೆಚ್ಚು ಅಸಕ್ತಿ ಇರುವ ನಿಮಗೆ ಕರ್ಮ ಫಲದಲ್ಲಿ ಅಂತಹ ಯಾವುದೇ ಗಂಡಾಂತರಗಳು ಸಂಭವಿಸುವುದಿಲ್ಲ. ಹಲವು ಸಂಧರ್ಭದಲ್ಲಿ ಮರಳಿ ಯತ್ನವ ಮಾಡು ಎಂಬ ಪರಿಸ್ಥಿತಿ ನಿರ್ಮಾಣವಾದಿತು. ನಂಬಿದವರಿಂದ ವಂಚನೆ, ಅನಗತ್ಯ ಸಂಧರ್ಭಗಳು ಮಾನಸಿಕ ಶಾಂತಿಯನ್ನು ಕಡಿಮೆ ಮಾಡುತ್ತದೆ. ಅಕ್ಟೊಬರ್ ತಿಂಗಳು ಕಳೆದ ನಂತರ ಉತ್ತಮ ಫಲಿತಾಂಶ ವಿರುತ್ತದೆ. ಸಣ್ಣ ಪುಟ್ಟ ಅಪಘಾತ ಭಯ, ಮರೆಗುಳಿತನದಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ.  ಫೆಬ್ರವರಿ ತಿಂಗಳ ನಂತರ ಹಲವು ಶುಭ ವಾರ್ತೆಗಳಿಂದ ಸಂತೋಷಗೊಳ್ಳುವಿರಿ. ದೂರ ಪ್ರವಾಸ ದೇವರ ದರ್ಶನ, ದೇವಾತ ದರ್ಶನ ಸಂಸಾರದಲ್ಲಿ ದರ್ಶನ, ಮಕ್ಕಳಿಗೆ ಉದ್ಯೋಗ ದೊರೆತು ನೆಮ್ಮದಿ ಉಂಟಾಗುವುದು.

ಮಕರ ರಾಶಿ

ಗುರು ಮತ್ತು ಶನಿಗ್ರಹರ ಸಂಚಾರವು ಈ ಸಂವತ್ಸರದಲ್ಲಿ ನಿಮಗೆ ವಿಶೇಷ ಅನುಕೂಲ ಉಂಟುಮಾಡುತ್ತವೆ. ವಾಹನ ಭಾಗ್ಯ, ಮನೆ ಭಾಗ್ಯ ನಿಮ್ಮದಾಗುತ್ತದೆ. ಬಂಧು ಭಗಿನಿಯರ ವಿಶೇಷ ಸಹಕಾರ, ಸಹೋದರ ವರ್ಗದವರ ಪ್ರೀತಿ ಗೌರವಗಳು ಹೆಚ್ಚಾಗಿ ಉತ್ತಮ ಮಾರ್ಗಗಳು ಗೋಚರಿಸುತ್ತದೆ. ಹೊಸ, ವ್ಯಪಾರ, ಉದ್ಯೋಗ ಮಾಡುವವರಿಗೂ ಸಕಾಲದಲ್ಲಿ ನೆರವು ದೊರೆತು, ಉನ್ನತ ಮಟ್ಟಕ್ಕೆ ತಲುಪುವ ಸಾಧ್ಯತೆಗಳು ಹೆಚ್ಚು. ಡಿಶಂಬರ್ ವರೆಗೂ ಶುಭ ಶಕುನಗಳು ಮುಂದುವರಿಯುತ್ತದೆ. ಸಂವತ್ಸರದ ಕೊನೆಯ ಮೂರು ಮಾಸವು ಸ್ವಲ್ಪ ಏರುಪೇರಾಗುವ ಸಂದರ್ಭವಿರುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಉತ್ತಮ ಅಂಕ ದೊರೆತು ಮನ್ನಣೆ ಪಡೆಯುವರು. ಂಅನೆಯಲ್ಲಿ ಕಳ್ಳತನವಾಗ ಬಹುದು. ವೃಥಾ ತಿರುಗಾಟ, ಸೃಜನ ಪಕ್ಷಪಾತ, ಸಾಮಾಜಿಕ ಅವಹೇಳನದಿಂದ ಸಂತ್ರಾಸವುಂಟಾಗುವುದು. ಸಂವತ್ಸರದ ಬಹುಪಾಲು ಸಮಯದಲ್ಲಿ ನಿರೀಕ್ಷಿತ ಫಲಗಳು ಈಡೇರಿ, ಬಹುಕಾಲದ ರೋಗ ರುಜಿನಗಳಿಂದ ಬಹುಪಾಲು ಗುಣಮುಖ ಹೊಂದುವಿರಿ. ನಿಮ್ಮ ಮೇಲೆ ಅವಲಂಬಿತರಾದ ಜನರು ನಿಮಗೆ ಸಂಪೂರ್ಣ ಸಹಕಾರ ನೀಡಿ ವ್ಯಾಪರ ವಹಿವಾಟು ವೃದ್ದಿಯಾಗುತ್ತದೆ.  ಕಬ್ಬಿಣ, ಸಿಮೆಂಟ್ ವ್ಯಾಪಾರದವರಿಗೆ ವಸೂಲಾತಿಗಳೂ ಸಮಯಕ್ಕೆ ಸರಿಯಾಗಿ ನಡೆದು ತೃಪ್ತಿ ಹೊಂದುವಿರಿ. ಮಕ್ಕಳು ಬಂಧುಗಳಿಂದ ನಿರಂತರ ಶುಭಫಲಗಳು, ಸುವಾರ್ತೆಗಳನ್ನು ಕೇಳುವಿರಿ. ಒಟ್ಟಾರೆಯಾಗಿ ಈ ವರ್ಷಶುಭಫಲಗಳು ಅಧಿಕವಾಗಿರುತ್ತದೆ. ಕುಲ ದೇವರ ಸತತ ಅರಾಧನೆಯಿಂದ ಎಲ್ಲಾ ರೀತಿಯ ತೊಂದರೆಗಳಿಂದ ಹೊರಬರುವಿರಿ.

ಮೀನ ರಾಶಿ

ಒಟ್ಟಾರೆ ಫಲಗಳು ಸುಖ ದು:ಖಗಳಿಂದ ಕೂಡಿದ್ದರೂ ನಿರಂತರ ಪರಿಶ್ರಮ, ಸತತ ಸಂಪರ್ಕಗಳಿಂದ ಹಲವು ಕಾರ್ಯಗಳು ನೆರವೇರುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಿರಂತರವಾಗಿ ನಡೆಯುವುದಲ್ಲದೇ, ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವ ಸಂದರ್ಭವಿರುತ್ತದೆ. ಅನಗತ್ಯ ತಿರುಗಾಟ, ಕಾರ್ಯ ವಿಳಂಬಗಳಿಂದ ಸ್ವಲ್ಪಮಟ್ಟಿನ ತೊಡಕು ಉಂಟಾಗುತ್ತದೆ.  ವ್ಯಾಪಾರಸ್ಥರಿಗೆ, ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಶುಭ ಫಲಗಳಿರುತ್ತದೆ. ಬಹುಕಾಲದ ಹಿಂದಿನ ಬಾಕಿ ಹಣಗಳು ವಸೂಲಾಗಿ ತೃಪ್ತಿ ತರುತ್ತದೆ. ಉನ್ನತ ವ್ಯಾಸಂಗ, ವಿದೇಶ ಪ್ರಯಾಣ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ, ಉತ್ತಮ ಸ್ಥಾನಮಾನಗಳು ದೊರೆಯುತ್ತದೆ. ಭೂವ್ಯವಹಾರ, ಕೃಷಿ ಸಂಪತ್ತು ಹೆಚ್ಚುವುದಲದೇ ನಿಂತುಹೋದ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯುತ್ತದೆ. ಅವಸರದ ತೀರ್ಮಾನಗಳಿಂದ ಆರ್ಥಿಕ, ಸಾಮಾಜಿಕ ಸಂಕಷ್ಟವನ್ನು ಎದುರಿಸುವ ಸಂದರ್ಭವಿರುತ್ತದೆ. ಕೃತಿ ರಚನಾಕಾರರಿಗೆ, ಸಾಂಸ್ಕೃತಿಕ ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಪ್ರಗತಿ ಊಂಟಾಗುತ್ತದೆ.  ಪ್ರೀತಿ ಪಾತ್ರರ ಅಗಲುವಿಕೆಯಿಂದ ದು:ಖ ಪ್ರಾಪ್ತಿಯಾಗುವುದಲ್ಲದೇ ಸ್ವಲ್ಪ ಕಾಲ ನಿರಾಸಕ್ತಿ ಹೊಂದುವ ಸಂದರ್ಭವಿರುತ್ತದೆ. ವಿರೋಧಿಗಳು ಮಿತ್ರರಾಗಿ ಸಹಕರಿಸುವ ಸಮಯ ಬರುತ್ತದೆ. ಕುಶಲಕರ್ಮಿಗಳಿಗೆ ಹಲವು ಅವಕಾಶಗಳು ಒದಗಿ ಬರುವುದಲ್ಲದೇ ಅರ್ಥಿಕ  ಸ್ಥಿತಿಯು ವೃಧ್ಧಿಯಾಗುತ್ತದೆ. ಹೊಸ ವ್ಯಾಪಾರದ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತದೆ. ಆತ್ಮಸ್ಥೈರ್ಯ ಕುಂದುವ ಸಂದರ್ಭಗಳು ಬಂದರೂ ಕುಲದೇವರ ಸತತ ಅರಾಧನೆಯಿಂದ ಈ ವರ್ಷದಲ್ಲಿ ಉತ್ತಮ ಫಲ ಲಭ್ಯವಾಗುತ್ತದೆ.

|| ಸರ್ವೇಷಾಂ ಸನ್ಮಂಗಲಾನಿ ಭವಂತು ||

Scroll to Top