ಜನ್ಮ ಕುಂಡಲಿಯಲ್ಲಿ ತೋರಿ ಬರುವ ದಶಾಭುಕ್ತಿ ಫಲಗಳನ್ನು ಹೊಂದಿಸಿಕೊಳ್ಳಬೇಕು.

ಮೇಷ ರಾಶಿ
ಈ ಸಂವತ್ಸರವು ತಮಗೆ ಮಿಶ್ರಫಲವನ್ನು ನೀಡುವುದಲ್ಲದೆ ಋಣಾತ್ಮಕ ಫಲಿತಾಂಶಗಳಿಂದ ತೊಂದರೆಯ ಅಂಶಗಳು ಹೆಚ್ಚಾಗಿರುತ್ತದೆ. ಸಾಡೇಸಾತ್ಶನಿಯ ತೊಂದರೆಯೂ ಕೂಡ ಕೆಲವೊಮ್ಮೆಕೆಟ್ಟಪರಿಣಾಮ ಬೀರುತ್ತದೆ. ಕಳೆದ ವರ್ಷಕ್ಕಿಂತ ಸಕಲ ಕಾರ್ಯದಲ್ಲು ಹೆಚ್ಚಿನ ಪರಿಶ್ರಮವಿರುತ್ತದೆ. ಸುಲಭದ ಕೆಲಸಗಳು ಕೆಲವೊಮ್ಮೆ ದಿಕ್ಕು ತಪ್ಪಿ, ಎಣಿಸಿದ ಫಲಿತಾಂಶಗಳು ಸಿಗದೇ ಇರುವ ಅವಕಾಶವಿರುತ್ತದೆ .ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ದ್ವಂದ್ವ ನಿಲುವು, ಕೃಷಿಕರಿಗೆ ನೆರೆಹಾವಳಿಯಿಂದ ಕಷ್ಟ ನಷ್ಟಗಳುಸಂಭವಿಸುವ ಸಾಧ್ಯತೆ. ವ್ಯಾಪಾರಸ್ಥರಿಗೆ ಹಳೆ ಬಾಕಿ ಸ್ಥಗಿತಗೊಂಡು ಕಷ್ಟ ಸಾಧ್ಯವಾಗುತ್ತದೆ. ಛಲ ಹಿಡಿದ ತ್ರಿವಿಕ್ರಮನಂತೆ ಕೆಲಸ ಮಾಡುವ ನೀವು ನಿಧಾನವಾದರೂ ಪ್ರಗತಿ ಹೊಂದಿ ಸಂವತ್ಸರದ ಉತ್ತರಾರ್ಧದಲ್ಲಿ ಸಂತುಷ್ಟ ಗೊಳ್ಳುವಿರಿ. ಹೊಸದಾಗಿ ಸ್ವಂತ ವ್ಯಾಪಾರ ಮಾಡುವವರು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಬಹಳ ಜಾಗರೂಕರಾಗಿರಬೇಕು. ಅಕಸ್ಮಾತ್ಆ ರೋಗ್ಯದಲ್ಲಿ ಏರುಪೇರು, ನರ ಸಂಬಂಧಿ ವ್ಯತ್ಯಯಗಳು ತಾತ್ಕಾಲಿಕವಾಗಿ ಕಂಡುಬರುವುದು. ಕೌಟುಂಬಿಕ ಸಮಸ್ಯೆಗಳು, ವ್ಯರ್ಥ ಚರ್ಚೆಗಳು ಸಂತ್ರಸಗೊಳ್ಳುವುದಲ್ಲದೆ ಹಲವು ಸಂದರ್ಭಗಳಲ್ಲಿ ಆಯಾಸಗೊಳ್ಳುವ ಸಾಧ್ಯತೆ ಇರುತ್ತದೆ. ಮೊದಲೇ ಜಾಗೃತಿ ವಹಿಸಿ ಉಪಾಯದಿಂದ ಮಾಡಿದ ಕೆಲಸಗಳು ಉತ್ತಮ ಫಲಿತಾಂಶಗಳನ್ನು ತಂದುಕೊಡುತ್ತದೆ.

ಮಿಥುನ ರಾಶಿ
ಈ ವರ್ಷವೂ ಹಲವು ಏರುಪೇರುಗಳಿಂದ ಕೂಡಿದ್ದು ಉದ್ಯೋಗ ಮತ್ತು ವೃತ್ತಿ ಪರರಿಗೆ ಮಿಶ್ರ ಫಲ ಲಭಿಸುತ್ತದೆ ಕೆಲವು ಸಲ ವಿಶೇಷ ಪ್ರಯತ್ನ ಕೈಗೊಂಡರು ನೀವು ಎಣಿಸದಂತೆ ಫಲಿತಾಂಶ ಸಿಗುವುದು ವಿಳಂಬವಾಗುತ್ತದೆ. ಕೆಲಸಗಳು ನಿಧಾನವಾಗಿ ಆದರೂ ಕೈಗೂಡುತ್ತದೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನ ಮಾಡಿದರೆ ಉನ್ನತ ವ್ಯಾಸಂಗದ ಅವಕಾಶ ಉದ್ಯೋಗ ನಿರಂತರವಾಗಿ ಲಭಿಸುವುದು ಹೈನುಗಾರಿಕ ಪ್ರವರ್ತಿ ಅವರಿಗೆ ದನ ಕರುಗಳ ಆರೋಗ್ಯ ಕೆಟ್ಟು ತೊಂದರೆ ಉಂಟಾಗುವ ಸಂದರ್ಭ ವಿರುತ್ತದೆ ಜುಲೈ ನಂತರ ಅನಿರೀಕ್ಷಿತ ಧನ ಲಾಭ ಮತ್ತು ಬಹಳ ತಿಂಗಳಿನಿಂದಲೂ ಪ್ರಯತ್ನಿಸಿ ಬಿಟ್ಟ ಕೆಲಸ ಕಾರ್ಯಗಳು ಪುನಹ ನೆರವೇರುವುದು. ಸಮಾಜದಲ್ಲಿ ಉನ್ನತ ಸ್ಥಾನಗಳು ಲಭಿಸಿ ಎಲ್ಲರಿಂದಲೂ ಗುರಿತಿಸಲ್ಪಡುವಿರಿ. ಮಕ್ಕಳು, ಮೊಮ್ಮಕ್ಕಳು ಶುಭ ಸಮಾರಂಭದಲ್ಲಿ ಹೆಚ್ಚು ಸೇರುವುದಲ್ಲದೆ ಕುಟುಂಬ ಸಮೇತ ವಿದೇಶ ಯಾತ್ರೆ ಪುಣ್ಯ ಸ್ಥಳಗಳಿಗೆ ಪ್ರಯಾಣ ಮಾಡುವ ಅವಕಾಶಗಳು ಲಭ್ಯವಾಗುತ್ತದೆ. ಸರಕಾರಿ ನೌಕರಿಯನ್ನು ಪ್ರಯತ್ನಿಸುವವರಿಗೆ ನಿರೀಕ್ಷೆಯ ಫಲಿತಾಂಶ ದೊರೆಯುವುದಲ್ಲದೆ ಖಾಸಗಿ ಕಂಪೆನಿಗಳಲ್ಲಿ ದುಡಿಯುವ ಉದ್ಯೋಗಿಗಳಿಗೆ ನಿರೀಕ್ಷಿತ ಪದೋನ್ನತಿ ದೊರೆಯುತ್ತದೆ. ಸಂವತ್ಸರದ ಉತ್ತರಾರ್ಧದಲ್ಲಿ ಸಮಾಜ ಸೇವೆಗೆ ಹಣವನ್ನು ಖರ್ಚು ಮಾಡುವ ಸಂದರ್ಭದಲ್ಲಿ ದೇವರು ಕೊಟ್ಟ ಅನುಕೂಲ ವೆಂದು ತಿಳಿದು ಹಲವಾರು ಜನರಿಗೆ ಉಪಕರಿಸುವ ಅವಕಾಶ ಶಕ್ತಿ ತುಂಬಿ ಬರುತ್ತದೆ ಸ್ಪಷ್ಟ ಗುರಿಯತ್ತ ಪ್ರಯತ್ನದಲ್ಲಿ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ

ಸಿಂಹ ರಾಶಿ
ಗುರು ಮತ್ತು ಶನಿ ಗ್ರಹರ ಸಂಚಾರದಿಂದ ಉತ್ತಮ ಮತ್ತು ನಿಧಾನ ಪ್ರಗತಿಗಳಿಂದ ಈ ಸಂವತ್ಸರೂ ಕೂಡಿರುತ್ತದೆ ಆರೋಗ್ಯ ಭಾಗ್ಯದಲ್ಲಿ ವಿಶೇಷ ಜಾಗೃತ ವಹಿಸಬೇಕಾಗುತ್ತದೆ.
ಸದಾ ನಾಯಕತ್ವ ಗುಣಗಳನ್ನು ಹೊಂದಿರುವ ನೀವು ಹಲವು ಸ್ತರಗಳಲ್ಲಿ ಗುರುತಿಸಲ್ಪಡುವಿರಿ.
ಹೊಸ ವಿಚಾರಗಳು ತಲೆಗೆ ಹೊಳೆದು ಕಾರ್ಯ ಪ್ರವರ್ಥರಾಗಿ ಬಂದು ಮಿತ್ರರಲ್ಲಿ ಗೌರವ ಹೆಚ್ಚಿಸಿ ಕೊಳ್ಳುವಿರಿ ನರ ಸಂಬಂಧಿ ಮತ್ತು ಮಾನಸಿಕ ಸಂಬಂಧಿ ಸಮಸ್ಯೆಗಳು ಎದುರಿಸಬೇಕಾಗಿರುವುದರಿಂದ ಜಾಗರೂಕರಾಗಿರಬೇಕು. ಛಲ ಬಿಡದ ತ್ರಿವಿಕ್ರಮನಂತೆ ಮುನ್ನುಗ್ಗಿ ಕೆಲಸ ಮಾಡುವ ನಿಮ್ಮ ಹಠಮಾರಿತನವು ಉತ್ತಮ ಫಲಿತಾಂಶ ನೀಡಿದರೂ, ನಿಮ್ಮನ್ನು ತೊಂದರೆಗೆ ಸಿಲುಕಿಸುವ ಒಂದು ವರ್ಗವೇ ಸೃಷ್ಟಿಯಾಗುತ್ತದೆ.ವಿದ್ಯಾರ್ಥಿಗಳಿಗೆ, ಕೃಷಿಕರಿಗೆ, ವರ್ತಕರಿಗೆ, ಮಿಶ್ರಫಲಗಳು ಲಭಿಸುತ್ತದೆ.ಕೆಲವೊಮ್ಮೆ ಯಾರದೋ ತಪ್ಪಿನಿಂದ ಅಪವಾದಗಳು ಬಂದು ಖಿನ್ನರಾಗುವ ಸಂದರ್ಭವಿದೆ. ಮಾಡುವ ಕೆಲಸದಲ್ಲಿ ನಿಷ್ಠೆ ಹೊಂದಿರುವ ನೀವು ವಿಳಂಬವಾದರೂ ಯಶಸ್ಸು ಹೊಂದುವಿರಿ. ವ್ಯಾಪಾರ ವ್ಯವಹಾರದಲ್ಲಿ ಬಂದ ಲಾಭಗಳನ್ನು ದುಂದು ವೆಚ್ಚ ಮಾಡುವ ಸಂದರ್ಭವಿರುತ್ತದೆ. ಆಧ್ಯಾತ್ಮ ಭಜನೆ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಂದರ್ಭ ಒದಗಿಬರುವುದು. ದೀರ್ಘ ಕಾಲದ ಹೂಡಿಕೆಗಳು ಉತ್ತಮ ವರಮಾನ ತಂದುಕೊಡುತ್ತದೆ ಅನಗತ್ಯ ವಿಚಾರದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಿ ಮೌನ ವ್ರತವನ್ನು ಹಲವು ಸಂದರ್ಭಗಳಲ್ಲಿ ಆಚರಿಸಬೇಕಾಗುತ್ತದೆ.ಆಡದೆ ಮಾಡುವವ ರೂಢಿಯೊಳಗುತ್ತಮನು ಎನ್ನುವಂತೆ ಶ್ರೇಷ್ಠ ಗುಣವುಳ್ಳ ನೀವು ಸತ್ಕಾರ್ಯ ಮಾಡಿ ತೋರಿಸುವ ಅವಕಾಶವಿರುತ್ತದೆ.

ತುಲಾ ರಾಶಿ
ಈ ಸಂವತ್ಸರದಲ್ಲಿ ಗುರು ಬಲವು ನಿಮ್ಮನ್ನು ಉತ್ತುಂಗಕ್ಕೆ ಕೊಂಡಯುದಲ್ಲದೆ ಪೂರ್ವಯೋಜಿತ ಕಾರ್ಯಗಳೆಲ್ಲವೂ ಒಂದು ಹಂತಕ್ಕೆ ಬಂದು ಸಂತಸ ಪಡುವಿರಿ. ವಿದ್ಯಾರ್ಥಿಗಳಿಗೆ, ಉದ್ಯಮ ಕ್ಷೇತ್ರದಲ್ಲಿ ಎಲ್ಲಾ ರಂಗದಲ್ಲೂ ಪ್ರಗತಿ ಕಂಡುಬರುವುದು. ಹೊಸ ಉದ್ಯೋಗ ಹುಡುಕುವವರೆಗೆ ಶ್ರಮಿಕ ವರ್ಗದವರಿಗೆ ಉತ್ತಮ ಆರೋಗ್ಯ, ನಿರೀಕ್ಷಿತ ಫಲಗಳು ಲಭಿಸುತ್ತದೆ. ಹೊಸ ಹೊಸ ಆವಿಷ್ಕಾರಗಳು ಮತ್ತು ಉದ್ಯೋಗ ಅವಕಾಶಗಳು ಲಭಿಸುತ್ತದೆ. ಉನ್ನತ ಉದ್ಯೋಗ ಪ್ರಾಪ್ತಿ, ಹೊಸ ವ್ಯವಹಾರಗಳ ಅಭಿವೃದ್ಧಿ ಬಂಧು ಜನರ ಸಹಕಾರ ನಿಮ್ಮ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಕೃಷಿ, ಹೈನುಗಾರಿಕೆ, ಬ್ಯಾಂಕಿಂಗ್, ವೃತ್ತಿಪರರಿಗೆ ವಿಶೇಷವಾಗಿ ಅಭಿವೃದ್ಧಿ ಹೊಂದುವ ಲಕ್ಷಣಗಳಿವೆ. ಹಲವಾರು ವರ್ಷಗಳಿಂದ ಬರಬೇಕಾದ ಆಸ್ತಿ-ಪಾಸ್ತಿಗಳು ಮತ್ತು ಹಣ ತಮ್ಮ ಕೈ ಸೇರುತ್ತದೆ. ಸಂಘ ಸಂಸ್ಥೆಗಳಲ್ಲಿ ಉತ್ತಮ ಹೆಸರು ಪಡೆದು ಗುರುತಿಸಿಕೊಳ್ಳುವುದಲ್ಲದೆ ದೀನ ದಲಿತರಿಗೆ ಸಹಾಯಹಸ್ತ ನೀಡುವಿರಿ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ಮನೆಯಲ್ಲಿ ಕೆಲವೊಮ್ಮೆ ಕೌಟುಂಬಿಕ ವಾತಾವರಣ ಹದೆಗೆಟ್ಟು ವೈರಾಗ್ಯ ಉಂಟಾಗುವ ಮಟ್ಟಕ್ಕೆ ಹೋಗುವಿರಿ. ಶ್ರೀ ದೇವತಾ ಅನುಗ್ರಹದಿಂದ ಈ ಸಂವತ್ಸರವು ತಮಗೆ ಆಶಾದಾಯಕವಾಗಿದೆ ಎನ್ನಬಹುದು.

ಧನು ರಾಶಿ
ಈ ಸಂವತ್ಸರದ ಬಹುಪಾಲು ಸುಖವನ್ನು ಕಾಣುವ ನೀವು ವಿಶಾಲ ಮನೋಭಾವ ಬೆಳೆಸಿಕೊಳ್ಳುವಿರಿ. ಧೈರ್ಯ ಮತ್ತು ಉಪಾಯಗಳು ನಿರಂತರವಾಗಿ ನಿಮ್ಮನ್ನು ಉತ್ತುಂಗಕ್ಕೆ ಏರಿಸುವುದಲ್ಲದೆ ಸಹೃದಯ ಸ್ವಭಾವದವರಾದ ನಿಮಗೆ ಹಲವು ಪ್ರಯೋಜನಗಳು ನಿರಂತರವಾಗಿ ಲಭಿಸುತ್ತದೆ. ಕೃಷಿಕರು, ವಿದ್ಯಾರ್ಥಿಗಳು, ಉದ್ಯಮದಾತರು, ಉದ್ಯೋಗಿಗಳಿಗೆ ಶುಭ ವಾರ್ತೆಗಳನ್ನು ಕೇಳುವ,nಒಳಿತನ್ನು ಅನುಭವಿಸುವ ಸಕಾಲ ಒದಗಿಬರುತ್ತದೆ. ಸ್ಪರ್ಧಾಕಣದಲ್ಲಿ ಜಯಶೀಲರಾಗುವುದಲ್ಲದೆ ಇತರರಿಗೆ ಮಾದರಿಯಾಗುವ ಎಲ್ಲಾ ಲಕ್ಷಣವಿದೆ. ಸ್ಥಿರ ಮತ್ತು ಚರ ಆಸ್ತಿಗಳಲ್ಲಿ ವಿಶೇಷ ಲಾಭವಾಗಿ ದಾನ ಶೂರರಾಗುವ ಲಕ್ಷಣವಿದೆ. ಮನಸ್ಸು ವಿಶಾಲವಾಗಿ ನೆಮ್ಮದಿ ಉಂಟಾಗಿ ಸಮಾಜ ಸೇವೆಯಲ್ಲಿ ಮತ್ತು ಧಾರ್ಮಿಕ ಸಮಾರಂಭದಲ್ಲಿ ಭಾಗಿಗಳಾಗುವಿರಿ. ಅನಿರೀಕ್ಷಿತ ಅನಾರೋಗ್ಯಗಳು ಕೆಲವೊಮ್ಮೆ ಕಾಡುವುದಲ್ಲದೆ ದೂರ ಪ್ರಯಾಣ ತ್ರಾಸದಾಯಕವಾಗುತ್ತದೆ. ವೃತ್ತಿಪರರಿಗೆ ಹಾಗೂ ಉದ್ಯೋಗ ಹುಡುಕುವವರಿಗೆ ಇಷ್ಟವಾದ ಕೆಲಸ ಸಿಕ್ಕಿ ಪದೋನ್ನತಿ ಹೊಂದುವುದಲ್ಲದೇ ಬಂಧು ಜನರ ಮನ್ನಣೆಗೆ ಭಾಜನರಾಗುವಿರಿ. ಆಸ್ತಿ ವಿಚಾರದಲ್ಲಿ ಅನಾವಶ್ಯ ಕತ ಗಾದೆಗಳು ಸಿಲುಕಿ ಸಂತ್ರಸ್ಥರಾಗುವಿರಿ.nಭಾದ್ರಪದ ಮಾಸದ ನಂತರ ವ್ಯವಹಾರದಲ್ಲಿ ವಿಪರೀತ ಲಾಭ ಮತ್ತು ಹೊಸ ಹೂಡಿಕೆಗಳಿಂದ ಸಂತಸ ಪಡುವಿರಿ.nಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ನಿರೀಕ್ಷಿತ ಲಾಭವು ಸಕಾಲದಲ್ಲಿ ದೊರೆಯುವುದು.ಸ್ಥಿರ-ಚರ ಆಸ್ತಿಗಳ ಖರೀದಿಯಿಂದ ಮನೆಯಲ್ಲಿ ಸಂತಸದ ವಾತಾವರಣವಿರುವುದು. ಉತ್ತಮ ಬೆಳೆ ಧಾರಣೆ, ಪಶುಪಾಲನೆಯಿಂದ ಲಾಭ ವೃದ್ಧಿಯಾಗುವುದು. ಕೆಲವೊಮ್ಮೆ ಭಯದ ವಾತಾವರಣವು ನಿಶ್ಚಲರನ್ನಾಗಿ ಮಾಡಿದರೂ ಪುಟಿದೇಳುವ ಸ್ವಭಾವದಿಂದ ಯಶಸ್ಸು ಕಾಣುವಿರಿ.

ಕುಂಭ ರಾಶಿ
ಈ ವರ್ಷ ಮಿಶ್ರ ಪ್ರತಿಫಲ ಸಿಗುವುದಾದರೂ ತಮ್ಮ ಪ್ರಯತ್ನಕ್ಕೆ ಕೆಲವೊಮ್ಮೆ ವಿಶೇಷ ಪ್ರತಿಫಲ ಲಭ್ಯವಿರುತ್ತದೆ. ಧನಾತ್ಮಕ ಚಿಂತನೆ ಪ್ರಯತ್ನ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಅತಿಯಾದ ಉತ್ಸಾಹ ಬೇಡದ ವಿಷಯಗಳಿಗೆ ಮನಸ್ಸು ಚಿಂತಿಸಿ ಕೆಲವೊಮ್ಮೆ ತಾಪತ್ರಯಗಳಿಗೆ ಸಿಲುಕುವ ಸಂದರ್ಭವಿರುತ್ತದೆ. ಹಲವಾರು ಅವಕಾಶಗಳು ಲಭಿಸಿದರು ವ್ಯರ್ಥ ಕಾಲಹರಣವಾಗುವ ಸಂದರ್ಭ ಬರುತ್ತದೆ. ವಿದ್ಯಾರ್ಥಿಗಳಿಗೆ, ಕೃಷಿಕರಿಗೆ, ಉದ್ಯೋಗದಾತರಿಗೆ ಸಾಮಾನ್ಯ ಪ್ರಗತಿ ತೋರಿ ಬರುತ್ತದೆ. ಕುಟುಂಬದಲ್ಲಿ ಮಕ್ಕಳಿಂದ ಉತ್ತಮ ಕೆಲಸಗಳು ನೆರವೇರಿ ಹಲವಾರು ಧಾರ್ಮಿಕ ಕಾರ್ಯಗಳು ನೆರವೇರುತ್ತದೆ. ಸಂವತ್ಸರದ ಮಧ್ಯಭಾಗದ ನಂತರ ಆರೋಗ್ಯದಲ್ಲಿ ಏರುಪೇರು ವ್ಯವಹಾರಗಳಲ್ಲಿ ನಿಶ್ಚಿತ ಪ್ರಗತಿ ಮಂದವಾಗುತ್ತದೆ. ಉನ್ನತ ವ್ಯಾಸಂಗ ಮಾಡಬಯಸುವವರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಜಾನುವಾರುಗಳ ಖರೀದಿ, ಭೂ ಖರೀದಿ, ವಾಹನಗಳ ಖರೀದಿಯ ಯೋಚನೆಯು ಸಕಾಲದಲ್ಲಿ ಪೂರ್ಣವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಹೊಂದಿ ಇತರರಿಗೆ ಮಾರ್ಗದರ್ಶನ ನೀಡುವಷ್ಟರ ಮಟ್ಟಿಗೆ ಉನ್ನತಿ ಹೊಂದುವಿರಿ. ಕೆಲವೊಮ್ಮೆ ತಾನೊಂದು ಬಗೆದರೆ ದೈವವೊಂದು ಎನ್ನುವಂತೆ ಪರಿಸ್ಥಿತಿ ಬಂದರೂ ಪೂರ್ವತಯಾರಿ ಮಾಡಿಕೊಂಡ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ನಿಮ್ಮ ಉನ್ನತಿಯನ್ನು ಸಹಿಸದ ಹಿತ ಶತ್ರುಗಳು ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ.ಕುಲದೇವರ ಸತತ ಆರಾಧನೆಯಿಂದ ವಿಶೇಷವಾಗಿ ದೈವೀಶಕ್ತಿಯನ್ನು ಪಡೆಯುವಿರಿ.

ವೃಷಭ ರಾಶಿ
ಈ ಸಂವತ್ಸರ ನಿಮಗೆ ಒಟ್ಟಾರೆಯಾಗಿ ಸಂತಸದ ನಿರೀಕ್ಷೆಯ ಫಲಿತಾಂಶ ದೊರೆಯುತ್ತದೆ.
ಲಾಭದ ಶನಿಯು ಕೂಡ ನಿಮಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಕೊಡುವುದರಿಂದ ಕುಟುಂಬ,
ಬಂಧುಮಿತ್ರರು ಮತ್ತು ಸಮಾಜದ ಎಲ್ಲಾ ಕಡೆಯಲ್ಲೂ ಪ್ರಸಿದ್ಧಿ ಹೊಂದುವಿರಿ.
ಸ್ವಲ್ಪ ಅಹಂಕಾರ ಮನೋಭಾವ ಉಳ್ಳವರು ತಗ್ಗಿ ಬಗ್ಗಿ ನಡೆಯುವ ಅಭ್ಯಾಸವಿದ್ದರೆ ತುಂಬಾ ಒಳ್ಳೆಯದು.ಸಂತೋಷ, ನೆಮ್ಮದಿಯ ಜೀವನ ನಿಮ್ಮದಾಗುವುದಲ್ಲದೆ ಪರೋಪಕಾರ ಮನೋಭಾವ ಹೆಚ್ಚಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುವಿರಿ. ವಿದ್ಯಾರ್ಥಿಗಳಿಗೆ, ವೈದ್ಯರಿಗೆ, ತಾಂತ್ರಿಕರಿಗೆ ಪದೋನ್ನತಿ ಹೊಂದುವುದಲ್ಲದೆ, ಅನಿರೀಕ್ಷಿತ ಯಶಸ್ಸು ದೊರೆತು ಆನಂದ ಹೊಂದುವಿರಿ. ಆರೋಗ್ಯ ಏರುಪೇರಾದರೂ ಹಿಡಿತದಲ್ಲಿ ಇರುವ ಸಾಧ್ಯತೆ ಇರುತ್ತದೆ. ಉಪಕಾರ ಮಾಡುವಾಗ ಅನಗತ್ಯ ತೊಂದರೆಗಳು ಸಿಲುಕಿ ಮಾನಹಾನಿಯಾಗುವ ಸಂದರ್ಭವಿರುತ್ತದೆ. ನಿಮ್ಮ ಅಸಾಧಾರಣ ಪ್ರತಿಭೆಯನ್ನು ನೋಡಿ ವಿರೋಧಿಗಳ ಗುಂಪು ಸೃಷ್ಟಿಯಾಗುತ್ತದೆ. ವಿದೇಶ ಪ್ರವಾಸ, ಉನ್ನತ ವ್ಯಾಸಂಗ, ಕೃಷಿ, ರೈತಾಪಿ ವರ್ಗದವರಿಗೆ ಪರಿಶ್ರಮಕ್ಕೆ ತಕ್ಕ ಫಲವಿರುತ್ತದೆ. ಡಿಸೆಂಬರ್ ನಂತರ ಆರೋಗ್ಯದಲ್ಲಿ ಏರುಪೇರು, ಬಾಕಿ ಹಣಗಳು ಸಕಾಲದಲ್ಲಿ ಬರುವುದು ವಿಳಂಬವಾಗುತ್ತದೆ. ಸಂವತ್ಸರದ ಕೊನೆಯ ಭಾಗದಲ್ಲಿ ಮಾನಸಿಕ ಹಿಂಸೆಗಳು ಕಂಡುಬಂದು ಸಂತ್ರಾಸರಾಗುವ ಸಂದರ್ಭವಿರುತ್ತದೆ. ಒಟ್ಟಾರೆ ಈ ಸಂವತ್ಸರವು ಆಶಾದಾಯಕವಾಗಿರುತ್ತದೆ.

ಕರ್ಕಾಟಕ ರಾಶಿ
ಈ ಸಂವತ್ಸರವು ನಿಮಗೆ ನಿರೀಕ್ಷಿತ ಫಲಿತಾಂಶಗಳನ್ನು ಕೊಡುವುದರಲ್ಲಿ ರಾಹು ಮತ್ತು ಗುರು ಗ್ರಹದ ಉಪಟಳದಿಂದ ವಿಳಂಬವಾಗುತ್ತದೆ. ವೃಥಾ ಕಾರಣ ಕೆಲಸಗಳು ಸಂಪರ್ಕ ಕೊರತೆಗಳಿಂದ ನಿರ್ಣಯ ತೆಗೆದುಕೊಳ್ಳಲು ಶ್ರಮಿಸಬೇಕಾಗುತ್ತದೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕಾಗುವುದು ನಿರ್ಲಕ್ಷ ಮಾಡಿದ್ದಲ್ಲಿ ಗಂಡಾಂತರಕ್ಕೆ ಸಿಲುಕು ಅಪಾಯವಿರುತ್ತದೆ. ವಿದ್ಯಾರ್ಥಿಗಳಿಗೆ, ಕೃಷಿಕರಿಗೆ, ಉದ್ಯೋಗಿಗಳಿಗೆ ನಿರೀಕ್ಷಿತ ಫಲಿತಾಂಶ ತಪ್ಪಿ ಹೋಗುವ ಸಂಭವವಿರುತ್ತದೆ ಬರಬೇಕಾದ ಹಣಗಳು ನಿಂತು ತೊಂದರೆಗೆ ಸಿಲುಕುವ ಅಪಾಯವಿರುತ್ತದೆ. ಆಧ್ಯಾತ್ಮ ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಮನ:ಶಾಂತಿ ಪಡೆಯುವಿರಿ ಅಮ್ಮ ದುರ್ಗೆಯ ಸತತ ಆರಾಧನೆಯಿಂದ ಕಷ್ಟ ನಷ್ಟಗಳು ನಿಧಾನವಾಗಿ ಪರಿಹಾರವಾಗುತ್ತದೆ.ದೀಪಾವಳಿ ಕಳೆದ ನಂತರ ಹಿಂದಿನ ಪ್ರಯತ್ನಗಳು ಫಲಗೂಡುವುದಲ್ಲದೆ ವಿಳಂಬಗೊಂಡ ಕಾರ್ಯಗಳು ಆರಂಭವಾಗಿ ಯಶಸ್ಸಿನತ್ತ ಸಾಗುವಿರಿ ಹೊಸ ವ್ಯವಹಾರಗಳು ಕೈಗೂಡುವುದಲ್ಲದೆ ಉತ್ತಮ ಸಂಪರ್ಕ ಸಿಕ್ಕಿ ತಮ್ಮ ವ್ಯವಹಾರ ವ್ಯಾಪಾರದಿಗಳನ್ನು ವೃದ್ಧಿಸಿಕೊಳ್ಳುವ ಸಂಯೋಗ ಬರುತ್ತಿದೆ. ಸ್ಪಾರ್ಟ್ ಆಫ್ ಕಂಪನಿಗಳನ್ನು ಹೊಂದಿದವರಿಗೆ ಹೊಸ ಉದ್ಯೋಗ ಸೃಷ್ಟಿ ಮಾಡುವ ಅವಕಾಶಗಳು ಒದಗಿಬರುವುದು. ಒಟ್ಟಾರೆಯಾಗಿ ಈ ಸಂವತ್ಸರದಲ್ಲಿ ಈ ಪ್ರಯತ್ನಕ್ಕೆ ತಕ್ಕ ಫಲ ದೊರೆಯುವುದು.

ಕನ್ಯಾ ರಾಶಿ
ಈ ಸಂವತ್ಸರದಲ್ಲಿ ಉತ್ತಮ ಫಲಗಳೇ ಎಲ್ಲಾ ವರ್ಗದವರಿಗೆ ಜಾಸ್ತಿ ಆಗಿರುತ್ತದೆ. ಆಸ್ತಿ ಖರೀದಿ, ಮನೆ ವ್ಯವಹಾರ ಮತ್ತು ಹಲವು ರೀತಿಯ ಭೂ ವ್ಯವಸ್ಥೆ ಮಾಡುವವರಿಗೆ ಉತ್ತಮ ಅವಕಾಶಗಳು ಲಭ್ಯವಿರುತ್ತದೆ. ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲವಿರುತ್ತದೆ. ನಿಮ್ಮಲ್ಲಿ ಹುದುಗಿದ ವಿಶೇಷ ಪ್ರತಿಭೆಯಿಂದ ನಿಮ್ಮನ್ನು ಹೆಚ್ಚಾಗಿ ಸಾರ್ವಜನಿಕರು ಗುರುತಿಸುತ್ತಾರೆ. ಸಭೆ ಸಮಾರಂಭಗಳಲ್ಲಿ ಸನ್ಮಾನ ಅಭಿನಂದನೆಯನ್ನು ಸ್ವೀಕರಿಸುವ ಅವಕಾಶಗಳು ಲಭ್ಯವಿರುತ್ತದೆ. ನಿಮ್ಮ ಪ್ರತಿಭೆಗಳಿಗೆ ಅವಕಾಶಗಳು ಒದಗಿ ಬಂದು ನೀವು ಪದೋನ್ನತಿ ಹೊಂದುವುದಲ್ಲದೆ ವಿರೋಧಿಗಳು ನಿಮ್ಮಿಂದ ದೂರವಾಗುವರು.
ಶತ್ರುಗಳು ಮಿತ್ರರಾಗುವುದಲ್ಲದೆ ಮಿತ್ರರು ಇನ್ನೂ ಹೆಚ್ಚಿನ ಸಹಾಯ ಮಾರ್ಗದರ್ಶನ ನೀಡುತ್ತಾರೆ. ಗಂಡ ಹೆಂಡಿರಲ್ಲಿ ಸಣ್ಣಪುಟ್ಟ ಜಗಳ ವಿಪರೀತ ಸ್ವಾಭಿಮಾನವು ವಿಕೋಪಕ್ಕೆ ಹೋಗುವ ಸಂದರ್ಭವಿರುತ್ತದೆ.ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಮತ್ತು ಫಲಿತಾಂಶ ಕಾಯುತ್ತಿರುವ ಯುವಕರಿಗೆ ಹಲವು ಅವಕಾಶಗಳು ಒದಗಿ ಬರುವುದಲ್ಲದೆ ಆಯ್ಕೆ ಪಟ್ಟಿಯಲ್ಲಿ ಉನ್ನತ ಸ್ಥಾನ ಹೊಂದುವ ಅವಕಾಶವಿರುತ್ತದೆ. ಆದರೆ ಕೆಲವೊಮ್ಮೆ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಗಲಿಬಿಲಿಗೊಳ್ಳುವ ಸಂದರ್ಭವಿರುತ್ತದೆ. ಕೃಷಿಕರಿಗೆ, ಹೈನುಗಾರರಿಗೆ ಉತ್ತಮ ಬೆಳೆ, ಮಳೆಯಿಂದ ಸಮೃದ್ಧಿ ಉಂಟಾಗುವುದಲ್ಲದೆ ಮನೆಯಲ್ಲಿ ಹಲವು ರೀತಿಯ ಮಂಗಳಕರ ಕಾರ್ಯ ಉಂಟಾಗುತ್ತದೆ.

ವೃಶ್ಚಿಕ ರಾಶಿ
ಈ ಸಂವತ್ಸರವ ತಮಗೆ ಅಂತಹ ಉತ್ತೇಜಿಸುವ, ಸಂತಸ ಪಡುವ ಅವಕಾಶಗಳನ್ನು ಕಡಿಮೆ ಮಾಡುತ್ತದೆ. ಆರೋಗ್ಯ ವಿಚಾರದಲ್ಲಿ ಸಾಕಷ್ಟು ಮುಂಜಾಗರೂಕರಾಗಿರಬೇಕು. ಸತತ ಪ್ರಯತ್ನವೊಂದೇ ಉತ್ತಮ ದಾರಿ ಎಂದು ತಿಳಿದು ಚುರುಕಾಗಬೇಕು. ಉದಾಸಿನ ಪ್ರವೃತ್ತಿ ಹೆಚ್ಚಾಗಿ ಅವಕಾಶಗಳು ಕಡಿಮೆಯಾಗುವ ಸಂಭವವಿರುತ್ತದೆ. ವ್ಯಾಯಾಮ, ಯೋಗ ಮತ್ತು ಸಮತೋಲನ ಆಹಾರ ಸೇವನೆಯಿಂದ ದುಗುಡವನ್ನು ಕಡಿಮೆ ಮಾಡಿಕೊಳ್ಳಬೇಕು. ನೆರೆಹಾವಳಿಯಿಂದ ಬೆಳೆಗಳ ನಾಶವಾಗಿ ದುಃಖಿತರಾಗುವ ಸಂದರ್ಭಗಳು, ಮನೆಯಲ್ಲಿ ಹಿರಿಯರ ಅಕಸ್ಮಾತ್ ನಿಧನ ವಾರ್ತೆಯು ಕೇಳಿ ಬಂದು ದುಃಖಪಡುವಿರಿ. ವಿದ್ಯಾಭ್ಯಾಸ ಮತ್ತು ವೃತ್ತಿ ಸಂಬಂಧ ವಿಚಾರಗಳಲ್ಲಿ ದ್ವಂದ್ವ ನಿಲುವುಗಳಿಂದ ಕಾರ್ಯ ವಿಳಂಬವಾಗುವುದಲ್ಲದೆ ನಿರೀಕ್ಷಿತ ಫಲಿತಾಂಶಗಳು ಕೈ ತಪ್ಪುವ ಸಾಧ್ಯತೆ ಇರುತ್ತದೆ. ಹುಟ್ಟು ಸಾವುಗಳ ಸಂಸಾರಗಳಲ್ಲಿ ಹಲವು ಜಂಜಾಟಗಳು ತೋರಿ ಬಂದರು ನಿರಂತರ ಕುಲದೇವರ ಆರಾಧನೆಯಿಂದ ದೈವೀ ಪ್ರಚೋದನೆಯಿಂದ ದೊಡ್ಡ ಅವಘಡಗಳನ್ನು ತಪ್ಪಿಸಿಕೊಳ್ಳಬಲ್ಲಿರಿ. ಎಣಿಸಿದ ಹಣಕ್ಕಿಂತ ಅಧಿಕ ಹಣ ವಿನಿಯೋಗವಾಗಿ ಪಶ್ಚಾತ್ತಾಪ ಪಡುವ ಸಂದರ್ಭ, ಹತ್ತಿರದ ಬಂಧುಗಳು ವಿನಾಕಾರಣ ದೂರವಾಗಿ ದುಃಖ ಹೊಂದುವಿರಿ. ಪೂರ್ವಜನ್ಮದ ಪುಣ್ಯದ ಫಲಗಳು ನಿಮ್ಮನ್ನು ಕೈ ಬಿಡದೆ ಪೋಷಿಸುವುದರಿಂದ ಸುಕೃತ ಕಾರ್ಯಗಳು ಅಲ್ಲಲ್ಲಿ ನಡೆದು ಧೈರ್ಯ ಉಂಟಾಗುತ್ತದೆ. ಮನೋ ನಿಗ್ರಹದಿಂದ ಸ್ಪಷ್ಟ ಗುರಿಯಿಂದ ಹಲವು ಕೆಲಸಗಳು ಸಂವತ್ಸರದ ಅಂತ್ಯ ಭಾಗದಲ್ಲಿ ನೆರವೇರುತ್ತದೆ.

ಮಕರ ರಾಶಿ
ಗ್ರಹಗತಿಗಳ ವಿಚಾರದಲ್ಲಿ ಈ ವರ್ಷ ವಿಪರೀತ ಆಶಾದಾಯಕ ಫಲಿತಾಂಶಗಳು ಕಡಿಮೆ ಎನ್ನಬಹುದು. ಚಿಕ್ಕ ಪುಟ್ಟ ಸಮಸ್ಯೆಗಳನ್ನು ಬೇರು ಸಹಿತ ಕಿತ್ತೊಗೆಯಲು ವಿಪರೀತ ಪ್ರಯತ್ನ ಮಾಡಬೇಕಾಗುತ್ತದೆ. ಅಪಘಾತ ಭಯ ,ಚೋರ ಭಯಗಳು ಉಂಟಾಗಿ ಸಂದಿಗ್ಧ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ವಿನಾಕಾರಣ ಕುಟುಂಬಕರಲ್ಲಿ ಭಿನ್ನಾಭಿಪ್ರಾಯ, ನಿಷ್ಟೂರಗಳು ತಲೆದೋರುತ್ತದೆ. ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಗಳಿದ್ದು ಪ್ರಯತ್ನಕ್ಕೆ ತಡವಾಗಿ ಆದರೂ ಫಲಿತಾಂಶ ದೊರೆಯುತ್ತದೆ.ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವ ವಿಷಮ ಪರಿಸ್ಥಿತಿ ಉಂಟಾಗುತ್ತದೆ. ಅನಿರೀಕ್ಷಿತ ಗೆಳೆಯರ ಸಂಪರ್ಕದಿಂದ ಮೋಸ ಹೋಗುವ ಪರಿಸ್ಥಿತಿ ಬಂದು ಹೈರಾಣರಾಗುವ ಪರಿಸ್ಥಿತಿ ಬರುತ್ತದೆ. ಉದ್ಯಮ ಕ್ಷೇತ್ರಗಳಲ್ಲಿ ಸದಾ ಹೊಸತನವನ್ನು ಹುಡುಕುವವರಿಗೆ ವಿಶೇಷ ಅವಕಾಶಗಳು ಲಭಿಸಿ ಕೆಲವೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆ ಹೊಂದುವ ಸದವಕಾಶಗಳು ಲಭಿಸುತ್ತದೆ. ಮಾರ್ಗದರ್ಶಕರ ಕೊರತೆ ಸಕಾಲದಲ್ಲಿ ಸಿಗದೇ ಕಷ್ಟ ಪಡಬೇಕಾದೀತು. ನಿರೀಕ್ಷಿತ ಸಹಾಯ ಮಾಡಲು ಆಗದೆ ಬಂಧು ಜನರು ದೂರ ಸರಿಯುವ ಸಾಧ್ಯತೆ ಇದೆ. ವ್ಯವಹಾರ ವಿಸ್ತರಿಸುವ ಅವಸರದಲ್ಲಿ ಬಾಕಿಗಳು ಸಕಾಲದಲ್ಲಿ ಬರದೇ ಚಿಂತಾಕ್ರಾಂತ ರಾಗುವಿರಿ. ಮಕರ ಸಂಕ್ರಾಂತಿಯ ನಂತರ ನಿಮ್ಮ ಬಹುದಿನದ ನಿರೀಕ್ಷೆಗಳು ಈಡೇರಿ ಸಂತಸ ಪಡುವಿರಿ. ಹೊಸ ಜನರ ಪರಿಚಯವಾಗಿ ನಿಮ್ಮ ಕ್ಷೇತ್ರಗಳಲ್ಲಿ ಸತತ ದುಡಿಮೆಯಿಂದ ಯಶಸ್ಸನ್ನು ಹೊಂದುವಿರಿ. ಸ್ಪರ್ಧಿಗಳು ನಿಮ್ಮ ಪ್ರತಿಭೆಯನ್ನು ಕಂಡು ತೊಂದರೆ ಕೊಡುವುದನ್ನು ಕಡಿಮೆ ಮಾಡುತ್ತಾರೆ. ಸಮಾಜದಲ್ಲಿ ನಿಮ್ಮ ಗುರುತಿಸುವಿಕೆಯಿಂದಾಗಿ ಪ್ರಶಸ್ತಿ, ಸನ್ಮಾನಗಳು ಲಭಿಸಿ ವ್ಯವಹಾರಗಳನ್ನು ವಿಸ್ತರಿಸಿಕೊಳ್ಳುವಿರಿ.

ಮೀನ ರಾಶಿ
ಸಾಡೇಸಾತಿಯ ಪ್ರಭಾವವಿದ್ದರೂ ಕೂಡ ಶನಿ ಗ್ರಹದ ತೊಂದರೆ ವಿಪರೀತ ವಾಗಿರುವುದಿಲ್ಲ.
ಆರಂಭದಲ್ಲಿ ಕೆಲವು ಕೆಲದಸಲ್ಲಿ ವಿಘ್ನಗಳು ಕಂಡುಬಂದರು ಮರಳಿ ಯತ್ನವ ಮಾಡುವ ಸಹಕಾರ ಪ್ರೋತ್ಸಾಹ ಸಿಗುವುದರಿಂದ ಯಾವುದೇ ರೀತಿಯ ಕೆಟ್ಟ ಪರಿಣಾಮಗಳು ಬೀರುವುದಿಲ್ಲ. ಸಂವತ್ಸರದ ಆರಂಭದಲ್ಲಿ ಸ್ವಲ್ಪ ಋಣಾತ್ಮಕ ಬೆಳವಣಿಗೆಗಳು ಇದ್ದರೂ ಮಧ್ಯ ಭಾಗದಲ್ಲಿ ಉತ್ತಮ ಫಲಿತಾಂಶಗಳಿರುತ್ತದೆ. ಎಲ್ಲಾ ಪ್ರಯತ್ನಗಳಲ್ಲೂ ಉತ್ತಮ ಫಲಿತಾಂಶ ದೊರೆಯದಿದ್ದರೂ ಮಿಶ್ರ ಫಲವಿರುತ್ತದೆ.ಭೂ ತಕರಾರು ನ್ಯಾಯಾಲಯದಲ್ಲಿ ನಿರೀಕ್ಷಿತ ಜಯ ಸಿಕ್ಕಿ ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ರೈತರಿಗೆ,ಉದ್ಯಮಿಗಳಿಗೆ, ಉದ್ಯೋಗದಲ್ಲಿರುವವರಿಗೆ ಉತ್ತಮ ಮತ್ತು ಮಧ್ಯಮ ಯಶಸ್ಸು ಸಿಗುತ್ತದೆ. ಆರೋಗ್ಯ ಭಾಗದಲ್ಲಿ ಏರುಪೇರು ತೀರ್ಥಯಾತ್ರೆಯ ಅವಕಾಶವಿರುವುದಲ್ಲದೆ ವಾಹನ, ಭೂಮಿ ಖರೀದಿಯಂತಹ ಅವಕಾಶಗಳು ಲಭ್ಯವಾಗುತ್ತದೆ.ನವರಾತ್ರಿ ನಂತರದಲ್ಲಿ ವಿನಾಕಾರಣ ಆಪಾದನೆ, ಅನ್ಯರಿಂದ ಕಿರುಕುಳ,ಕೈಗೆತ್ತಿಕೊಂಡ ಕಾರ್ಯಗಳಲ್ಲಿ ವಿಘ್ನ ಮುಂತಾದುವುಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ದೇವರ ಸೇವೆಯಲ್ಲಿ ಜಾಸ್ತಿ ತೊಡಗಿಸಿಕೊಳ್ಳುವ ನೀವು ಸಮಾಜದಿಂದ ಗೌರವ ಆದರಗಳೊಂದಿಗೆ ವಿಶೇಷವಾಗಿ ಮನ್ನಣೆ ಪಡೆಯುವಿರಿ.ಸದಾ ಎಲ್ಲರ ಹಿತಚಿಂತಕರಾದ ನೀವು ಸಮುದ್ರದಲ್ಲಿ ಬುದ್ದಿವಂತ ಮೀನು ಜಾರಿ ತಪ್ಪಿಸಿಕೊಂಡಂತೆ ಜಾರಿ ತಪ್ಪಿಸಿಕೊಂಡಂತೆ ಸಾಹಸದ ಕೆಲಸಗಳಲ್ಲಿ ನಿಷ್ಣಾತರಾಗುವಿರಿ.